PAYMENT DUE ತುರ್ತು ಗಮನಕ್ಕೆ : ನಿಮ್ಮ ಖಾತೆಯ ವೆಬ್‌ಸೈಟ್ ಹಾಗೂ ಸೇವಾ ಬಾಕಿ ಮೊತ್ತ ಪಾವತಿ ಬಾಕಿ ಇದೆ. +91 9113013475
ಕಾನೂನು ಎಚ್ಚರಿಕೆ :
ಕರ್ನಾಟಕ ಭೂ ಸಂಪತ್ತು ಸಂರಕ್ಷಣೆ ಸಮಿತಿ (ರಿ) ಯ 2016-17 ರ ನೋಂದಾಯಿತ ಈ ಲೋಗೋ (Logo) ಅಧಿಕೃತವಾಗಿದ್ದು, ಸಮಿತಿಯ ಅಧಿಕಾರಿಗಳನ್ನು ಹೊರತುಪಡಿಸಿ ವಿನಾಕಾರಣ ಯಾವುದೇ ವ್ಯಕ್ತಿಗಳು ಅಥವಾ ಸಂಘಟನೆಗಳು ದುರುಪಯೋಗಪಡಿಸಿಕೊಂಡಿದ್ದಲ್ಲಿ ಹಾಗೂ ಈ ಲೋಗೋವನ್ನು ಯಾರಾದರೂ ನಕಲು (Same Copy) ಮಾಡಿದರೆ ಸಮಿತಿಯ ಮುಖಾಂತರ ನ್ಯಾಯಾಲಯದಲ್ಲಿ ಸೂಕ್ತ ಶಿಸ್ತಿನ ಹಾಗೂ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.

ನ್ಯಾಯ ದೇಗುಲ | ವಂದೇ ಮಾತರಂ

ಕರ್ನಾಟಕ ರಾಜ್ಯ ಭೂ ಸಂಪತ್ತು ಸಂರಕ್ಷಣೆ ಸಮಿತಿಯು ಭೂ ಹಗರಣಗಳನ್ನು ತನಿಖೆ ಮಾಡಲು, ಅಕ್ರಮ ಭೂ ವಹಿವಾಟುಗಳನ್ನು ತಡೆಗಟ್ಟಲು ಮತ್ತು ಭೂ ಸಂಪನ್ಮೂಲಗಳ ನ್ಯಾಯಯುತ ವಿತರಣೆಯನ್ನು ಖಾತ್ರಿಪಡಿಸಲು ರಚಿಸಲಾದ ರಾಜ್ಯ ಮಟ್ಟದ ತನಿಖಾ ಸಮಿತಿಯಾಗಿದೆ.

ಸದಸ್ಯರಾಗಲು ಅರ್ಜಿ ಸಲ್ಲಿಸಿ ಭೂ ಅಕ್ರಮದ ದೂರು ಸಲ್ಲಿಸಿ

31

ಜಿಲ್ಲೆಗಳ ತನಿಖಾ ಕಾರ್ಯವ್ಯಾಪ್ತಿ

2016-17

ಸ್ಥಾಪನೆಯಾದ ವರ್ಷ

100%

ಕಾನೂನು ಚೌಕಟ್ಟಿನ ಹೋರಾಟ

ಸಮಾನ ಪಾಲು

ಸಮಾನ ಜೀವನ ತತ್ವ

ಸಮಿತಿಯ ಜವಾಬ್ದಾರಿ ಮತ್ತು ಧ್ಯೇಯೋದ್ದೇಶಗಳು

ಕರ್ನಾಟಕ ರಾಜ್ಯದಲ್ಲಿ ಅಪಾರವಾದ ಭೂ ಸಂಪತ್ತಿದ್ದು, ಇದರ ಸಂರಕ್ಷಣೆಯು ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಸದರಿ ಭೂ ಸಂಪತ್ತನ್ನು ಸೂಕ್ತ ಹಾಗೂ ಸಮರ್ಪಕವಾದ ರೀತಿಯಲ್ಲಿ ಸಂರಕ್ಷಣೆ ಮಾಡುವುದು ಸಮಿತಿಯ, ಸದಸ್ಯರ ಹಾಗೂ ಸರ್ವ ಕರ್ನಾಟಕದ ಜನರ ಮೂಲ ಹಕ್ಕಾಗಿರುತ್ತದೆ. ಏಕೆಂದರೆ ಕರ್ನಾಟಕ ರಾಜ್ಯದಲ್ಲಿ ಅರಣ್ಯ, ಖನಿಜ ಸಂಪತ್ತು, ಜಲ, ಗುಡ್ಡ, ಬೆಟ್ಟ ಸಂಪತ್ತು ಹೀಗೆ ವಿವಿಧ ರೀತಿಯಲ್ಲಿ ಭೂ ಸಂಪತ್ತು ಇದ್ದು ಸದರಿ ಸಂಪತ್ತನ್ನು ಸೂಕ್ತವಾದ ರೀತಿಯಲ್ಲಿ ಬಳಕೆಯಾಗುವುದು ಅತ್ಯಂತ ಅವಶ್ಯಕವಾಗಿದೆ.

ತನಿಖಾ ಕಾರ್ಯಗಳು (Investigation)

ಭೂ ಹಗರಣಗಳನ್ನು ತನಿಖೆ ಮಾಡುವುದು, ಅಕ್ರಮ ಭೂ ವಹಿವಾಟುಗಳನ್ನು ತಡೆಗಟ್ಟುವುದು, ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಆಸ್ತಿ ಗಳಿಸಿದ ಪ್ರಕರಣಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸಂಬಂಧಪಟ್ಟ ಸರ್ಕಾರದ ಇಲಾಖೆಗಳು ಹಾಗೂ ನ್ಯಾಯಾಲಯಗಳಿಗೆ ವರದಿ ಸಲ್ಲಿಸುವುದು.

ಬಡವರಿಗೆ ಭೂಮಿ & ಸಮಾನ ಪಾಲು

ಭೂ ಮಾಫಿಯಾ ಹಾಗೂ ಒತ್ತುವರಿದಾರರಿಂದ ಮರಳಿ ಸರ್ಕಾರದ ವಶಕ್ಕೆ ತಂದ ಭೂ ಸಂಪತ್ತನ್ನು ರಾಜ್ಯದ ಎಲ್ಲಾ ಕಡು ಬಡವರಿಗೆ ಮತ್ತು ಮನೆ ಇಲ್ಲದ ನಿರ್ಗತಿಕರಿಗೆ ಕೊಡಿಸುವುದು ಹಾಗೂ "ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು" ತತ್ವದಡಿ ನ್ಯಾಯ ದೊರಕಿಸುವುದು.