ಕರ್ನಾಟಕ ಭೂ ಸಂಪತ್ತು ಸಂರಕ್ಷಣೆ ಸಮಿತಿ (ರಿ) - ಒಂದು ಕಿರು ಪರಿಚಯ
ಉಗಮ ಮತ್ತು ಕಾರ್ಯವ್ಯಾಪ್ತಿ
ಈ ಮೇಲ್ಕಂಡ ಸಮಿತಿಯು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ಉದಯವಾಗಿದ್ದು, ಸದರ ಸಮಿತಿಯ ಕಾರ್ಯವ್ಯಾಪ್ತಿಯು ಇಡೀ ಕರ್ನಾಟಕ ರಾಜ್ಯದಲ್ಲಿ ವ್ಯಾಪಿಸಿದೆ.
ಸದರ ಸಮಿತಿಯ ಮೂಲ ಉದ್ದೇಶವು ಸಾರ್ವಜನಿಕ ಆಸ್ತಿಯನ್ನು ಒತ್ತುವರಿ ಮಾಡಿಕೊಂಡವರು ಭೂಮಿ, ಮಣ್ಣು, ಖನಿಜ ಸಂಪತ್ತು, ಗುಡ್ಡಗಾಡು, ಜಲ ಸಂಪತ್ತು ಮುಂತಾದವುಗಳನ್ನು ಕಬಳಿಸುವುದರ ವಿರುದ್ಧ ಧ್ವನಿ ಎತ್ತುವುದಾಗಿದೆ. ಸಾರ್ವಜನಿಕ ಭೂ ಕಬಳಿಕೆದಾರರ ಹಾಗೂ ಭೂ ಅತಿಕ್ರಮಣದಾರರ ಮತ್ತು ಪಂಚಾಯತ್ ಅಕ್ರಮ ಅಭಿವೃದ್ಧಿ ವಿರುದ್ಧ ವಿವಿಧ ರೀತಿಯಲ್ಲಿ ಭೂ ಸಂಪತ್ತು ಸಂರಕ್ಷಣೆಗೆ ಒಳಪಡಿಸುವುದರ ಮೂಲಕ ಧ್ವನಿ ಎತ್ತಿ, ಸದರ ಸಂಪತ್ತನ್ನು ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟವರಿಗೆ ಹಸ್ತಾಂತರಿಸುವ ಕಾರ್ಯವನ್ನು ಸಮಿತಿಯು ನಿರಂತರವಾಗಿ ಮಾಡುತ್ತದೆ.
ಕಾನೂನಾತ್ಮಕ ಕ್ರಮ ಮತ್ತು ನ್ಯಾಯಯುತ ನಿರ್ಣಯ
ಸರ್ಕಾರ ತೆಗೆದುಕೊಂಡ ಕ್ರಮಗಳು ಕಾನೂನಾತ್ಮಕವಾಗಿ ಜಾರಿಗೆ ಬರದಂತೆ ನೋಡಿಕೊಳ್ಳುವುದು ಹಾಗೂ ಭೂ ಸಂಪತ್ತಿನ ಕುರಿತು ಸಾರ್ವಜನಿಕವಾಗಿ ದೂರು ದುಮ್ಮಾನಗಳು ಕೇಳಿ ಬಂದಲ್ಲಿ, ಸದರ ಸಾಕಷ್ಟು ಸಾಕ್ಷಿ ಪುರಾವೆಗಳ ಸಂಗ್ರಹವಾದಾಗ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಸಂಪೂರ್ಣವಾಗಿ ಚೌಕಾಸಿ ಮಾಡಿ ಯಾರಿಗೂ ಹಾನಿಯಾಗದಂತೆ ಸರ್ಕಾರ ಹಾಗೂ ಜನ ಸಾಮಾನ್ಯರಿಗೆ ಅನುಕೂಲವಾಗುವ ರೀತಿಯಿಂದ ನ್ಯಾಯಸಮ್ಮತವಾದ ನಿರ್ಣಯಕ್ಕೆ ಪ್ರಯತ್ನಿಸಲಾಗುತ್ತದೆ.
ನಮ್ಮ ರಾಜ್ಯದಲ್ಲಿ ದಿನೇ ದಿನೇ ಸಾಕಷ್ಟು ಭೂಮಿ ಒತ್ತುವರಿ ಪ್ರಕರಣಗಳು ಬರುತ್ತಾ ಇರುತ್ತವೆ. ಅವುಗಳನ್ನು ತಳ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದಲ್ಲಿ ಸರ್ಕಾರ ಹಾಗೂ ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಸದರ ಭೂ ಸಂಪತ್ತು ಕುರಿತು ಸಾರ್ವಜನಿಕರಿಗೆ ದೂರು ದುಮ್ಮಾನ ಸಲ್ಲಿಸಲು ಸಮಿತಿಯಲ್ಲಿ ಮುಕ್ತ ಅವಕಾಶ ಇರುತ್ತದೆ. ಅಂತಹ ಪ್ರಕರಣಗಳನ್ನು ಸಮಿತಿಯು ಹಿಡಿದುಕೊಂಡು ಸರ್ಕಾರ ಮಟ್ಟದಲ್ಲಿ ವಿಚಾರಣೆ ಮಾಡಿಸಿ ಸೂಕ್ತ ಹಾಗೂ ನ್ಯಾಯ ಸಮ್ಮತವಾದ ನಿರ್ಣಯವನ್ನು ಸೂಕ್ತ ಸಮಯದೊಳಗೆ ಜನರಿಗೆ ಕಲ್ಪಿಸಿಕೊಡಲಾಗುತ್ತದೆ.
ಒತ್ತುವರಿದಾರರು ಮತ್ತು ಲೋಪವೆಸಗುವ ಅಧಿಕಾರಿಗಳ ವಿರುದ್ಧ ಕ್ರಮ
ಮೇಲ್ಕಂಡ ನಮ್ಮ ಸಮಿತಿಯು ಭೂ ಸಂಪತ್ತು ಆಗಲಿ ಅಥವಾ ಸಾರ್ವಜನಿಕ ಆಸ್ತಿಗೆ ಆಗಲಿ ಯಾರೇ ಒತ್ತುವರಿ ಮಾಡಿದರೂ ಹಾಗೂ ಹಾನಿ ಮಾಡಿದರೆ ಮತ್ತು ಅಧಿಕಾರಿಗಳು ಲೋಪದೋಷ ವೆಸಗಿದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತದೆ.
- ಸಾರ್ವಜನಿಕ ಜಾಗ, ಗೋಮಾಳ ಹಾಗೂ ಅರಣ್ಯ ಒತ್ತುವರಿ ಮಾಡಿದ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸುವುದು.
- ಕರ್ತವ್ಯ ಲೋಪ ಎಸಗಿದ ಅಥವಾ ಭೂ ಮಾಫಿಯಾಗೆ ಸಾಥ್ ನೀಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳ ಸಮೇತ ನ್ಯಾಯಾಲಯಕ್ಕೆ ಸಾಕ್ಷಿ ಒದಗಿಸುವುದು.
- ನ್ಯಾಯಾಲಯದ ಮೂಲಕ ತಪ್ಪಿತಸ್ಥರ ವಿರುದ್ಧ ಶಿಕ್ಷೆಯನ್ನು ವಿಧಿಸಲು ಅವಕಾಶ ಕಲ್ಪಿಸುವುದು.
- ತಪ್ಪಿತಸ್ಥರ ವಿರುದ್ಧ ಕೂಡಲೇ ಶಿಸ್ತುಕ್ರಮ ಕೈಗೊಳ್ಳಲು ನಮ್ಮ ಸಮಿತಿಯು ಸರ್ಕಾರಕ್ಕೆ ಅಧಿಕೃತವಾಗಿ ಶಿಫಾರಸ್ಸು ಮಾಡುತ್ತದೆ.